ಬಾಲ್ ಪೆನ್ ಶಶಿಕಾಂತ್ ನಿರ್ದೇಶನದ 2012 ರ ಕನ್ನಡ ಚಲನಚಿತ್ರವಾಗಿದೆ. ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ನಿರ್ಮಾಣದ ಈ ಚಿತ್ರವು ಮಕ್ಕಳ ಚಿತ್ರವಾಗಿದ್ದು, ಇದು ಮಕ್ಕಳಲ್ಲಿರುವ ಸಾಹಸ ಮನೋಭಾವ, ಭಾವನೆಗಳನ್ನು ಚಿತ್ರಿಸುತ್ತದೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಕೇಂದ್ರೀಕರಿಸುತ್ತದೆ. == ಪಾತ್ರವರ್ಗ == ಸುಚೇಂದ್ರ ಪ್ರಸಾದ್ ಮಾಸ್ಟರ್ ಸ್ಕಂದ ಮಾಸ್ಟರ್ ಶಾಲೋಮ್ ರಾಜ್ ಮಾಸ್ಟರ್ ಸಮರ್ಥ್ ಚೇತನಾ ಸುಂದರಿ ಶ್ರೀನಗರ ಕಿಟ್ಟಿ == ವಿಮರ್ಶೆಗಳು == 26 ಅಕ್ಟೋಬರ್ 2012 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ, ಬಾಲ್ ಪೆನ್ ಚಲನಚಿತ್ರ ವಿಮರ್ಶಕರಿಂದ ಸಾಮಾನ್ಯವಾಗಿ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. ಐಬಿಎನ್ ಲೈವ್ ಈ ಚಿತ್ರಕ್ಕೆ 3.5/5 ರೇಟಿಂಗ್ ನೀಡಿ ಚಿತ್ರದಲ್ಲಿನ ಮಕ್ಕಳ ಅಭಿನಯವನ್ನು ಶ್ಲಾಘಿಸಿದೆ. ತಾಂತ್ರಿಕ ವಿಭಾಗಗಳ ಪಾತ್ರವೂ ಮೆಚ್ಚುಗೆಗೆ ಪಾತ್ರವಾಯಿತು. ಚಿತ್ರಕ್ಕೆ 3.5/6 ರೇಟಿಂಗ್ ನೀಡಿದ ಸೂಪರ್‌ಗುಡ್‌ಮೂವೀಸ್, "ಬಾಲ್ ಪೆನ್ ಸಹಜವಾಗಿ ವಿವಿಧ ಅಂಶಗಳ ಮೇಲೆ ಸ್ಪರ್ಶಿಸುವ ಆಸಕ್ತಿದಾಯಕ ಕಥೆಯನ್ನು ಹೊಂದಿದೆ. ಆಸಕ್ತಿದಾಯಕ ಭಾಗವೆಂದರೆ ಮುಗ್ಧ ಮಕ್ಕಳ ಮನಸ್ಸುಗಳು ಸರಿಯಾದ ದೃಷ್ಟಿಕೋನದಲ್ಲಿ ಕೆಲಸ ಮಾಡುವ ಭಾಗ" ಎಂದು ಹೇಳಿತಲ್ಲದೆ ತಾಂತ್ರಿಕ ವಿಭಾಗಗಳ ಪಾತ್ರವನ್ನು ಶ್ಲಾಘಿಸಿತು. . ನ ರಾಜೇಂದ್ರ ಚಿಂತಾಮಣಿ ಅವರು ಚಿತ್ರಕ್ಕೆ 3/5 ರೇಟಿಂಗ್ ನೀಡಿದರು ಮತ್ತು "ಚಿತ್ರವು ಹೃದಯ ಸ್ಪರ್ಶಿಸುವ ಕಥೆ, ಸುಮಧುರ ಹಾಡುಗಳು ಮತ್ತು ವಯಸ್ಕರಿಗೆ ಕಣ್ಣು ತೆರೆಯುವ ವಿಷಯವನ್ನು ಹೊಂದಿದೆ" ಎಂದು ಬರೆದು, "ಚಲನಚಿತ್ರವು, ಕೆಲವು ಸ್ಥಳಗಳಲ್ಲಿ, ನೀರಸ ಕ್ಷಣಗಳನ್ನು ಹೊಂದಿರುವುದಾದರೂ ಒಟ್ಟಾರೆಯಾಗಿ ನ್ಯೂನತೆಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ." == ಧ್ವನಿಮುದ್ರಿಕೆ == ಚಿತ್ರದ ಸಂಗೀತವನ್ನು ಮಣಿಕಾಂತ್ ಕದ್ರಿ ಸಂಯೋಜಿಸಿದ್ದಾರೆ. ಆದಿತ್ಯ ರಾವ್ ಹಾಡಿರುವ ಚಿತ್ರದ ಮೊದಲ ಹಾಡು "ಸಾವಿರ ಕಿರಣವ ಚೆಲ್ಲಿ" ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡುಗಳ ಪಟ್ಟಿ == ಉಲ್ಲೇಖಗಳು ==